ಸ್ತ್ರೀ ಜೀವನ ಮತ್ತು ಅವಳ ಸ್ಥಾನ
ಈ ವಿಷಯದ ಬಗ್ಗೆ ಮಾತನಾಡಲು ನನಗೆ ಅರ್ಹತೆ ಇದಿಯೋ ಇಲ್ಲವೋ ಗೊತ್ತಿಲ್ಲ , ಒಂದು ಸಣ್ಣ ಪ್ರಯತ್ನ ಅಷ್ಟೇ .
ಜಾಗತಿಗ ಮಟ್ಟದಲ್ಲಿ ಮತ್ತು ಸಾಂಸಾರಿಕ ಮಟ್ಟದಲ್ಲಿ ಅವಳ ಪ್ರಭಾವ ಸ್ವಲ್ಪ ಎಚ್ಚಾಗಿಯೆ ಇದೆ .
ಹೆಣ್ಣಿನ ಮೇಲೆ ನಡೆಯುತಿರುವ ದೌರ್ಜನ್ಯ , ಮಾನಸಿಕ ಕಿರುಕುಳ , ಶೋಷಣೆ ಇಂದಿಗೂ ನಿಲ್ಲುತಿಲ್ಲ .
ಪ್ರಮುಖ ಪುರಾಣಗಳಾದ ರಾಮಾಯಣ ಮತ್ತು ಮಹಾಭಾರತಹ ಗ್ರಂಥಗಳನ್ನೂ ಉದಾಹರಣೆ ಜೀವನಕ್ಕೆ ಅಳವಡಿಸಿಕೊಂಡು ಅಂದುಕೊಂಡು ಬದುಕುತಿರುವ ನಾವುಗಳು . ಸ್ತ್ರೀ ಗೆ ಅನ್ಯಾಯ ವಾದಾಗ ಅವಳ ವೇದನೆ ಅವಳ ಕಣ್ಣೀರು , ಅನ್ಯಾಯ ಮಾಡಿದವನಿಗೆ ಅದ ಶಿಕ್ಷೆ ಎಲ್ಲರು ನೆನಪಿನಲ್ಲಿ ಇಡಬೇಕು .
ಪುರುಷ ಪ್ರದಾನ ಸಮಾಜ ಅಂದರೆ ಈಗಿರುವ ಸಮಾಜ ಅವನ ಸ್ವಾರ್ಥಕ್ಕಾಗಿ ಅವನಿಗೆ ಹೇಗೆ ಬೇಕೋ ಹಾಗೆ ಸಮಾಜವನ್ನು ನಿರ್ಮಿಸಿಕೊಂಡಿರಿದ್ದಾನೆ. ಮದುವೆ ಆದಮೇಲೆ ನಿನ್ನ ಹೆಂಡತಿ ಪ್ರತಿ ನಿಮಿಷ ಗಂಡ ಬೇಕು ಅನ್ನುವ ಹಾಗೆ ನೀನೇ ಮಾಡಿಕೊಂಡಿರುವುದು .
ಪ್ರತಿ ಕೆಲಸಕ್ಕೂ ನಿನ್ನಮೇಲೆ ಅವಲಂಬಿಯಾಗಿರಬೇಕೆಂದು ನೀನು ನಿರ್ಮಿಸಿದ ಗೋಡೆ ನಿನಗೆ ಅಡ್ಡಿಯಾಗಿರುವುದು .
ಸುಮಾರು ಜನರಿಗೆ ಇರುವ ತಿಳುವಳಿಕೆ ಕುರುಕ್ಷೇಥ್ರ ಯುದ್ಧ ನಡೆದಿದ್ದು ಆಸ್ತಿಗೋಸ್ಕರ ಅಂತ . ಖಂಡಿತ ಅಲ್ಲ ಒಬ್ಬ ಸ್ತ್ರೀ ಅದ ಅನ್ಯಾಯಕ್ಕೆ ಪ್ರತಿಕಾರ . ಮುಂದಿನ ಪೀಳಿಗೆಗೆ ಒಂದು ಬಹು ದೊಡ್ಡ ಉದಾಹರಣೆಯಾಗಿರಲಿ ಅಂತ ಯುದ್ಧ ನಡೆದಿದ್ದು .
ನಮ್ಮ ಧರ್ಮ ಗ್ರಂಥಗಲ್ಲಿ ಹೆಣ್ಣಿಗೆ ಅಪಾರವಾದ ಗೌರವ ಅವರಿಗೆ ಸಿಗಬೇಕಾದ ಸ್ಥಾನ ಎಲ್ಲವನ್ನು ಕೊಟ್ಟಿದೆ . ಈಗಿನ ಸಮಾಜದಲ್ಲೇ ಇಲ್ಲ.
Comments
Post a Comment